ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಹುಬ್ಬಳ್ಳಿಯ ಮಹಾತ್ಮ ಗಾಂಧಿ ಉದ್ಯಾನವನ, ಇಂದಿರಾ ಗಾಜಿನಮನೆ, ಸಂಗೀತ ಕಾರಂಜಿ, ಪಜಲ್ ಪಾರ್ಕಿಂಗ್, ಪುಟಾಣಿ ರೈಲು, ಸ್ಕೇಟಿಂಗ್ ಮೈದಾನ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಮಹಾತ್ಮ ಗಾಂಧಿ ಉದ್ಯಾನವನದ 21 ಎಕರೆ ಪ್ರದೇಶವನ್ನು 5 ವರ್ಷಗಳ ಕಾರ್ಯಚರಣೆ ಮತ್ತು ನಿರ್ವಹಣೆ ಸೇರಿ 10.96 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
1.6 ಕಿ.ಮೀ. ಕಾಲುದಾರಿ, 200 ಚ.ಮೀ. ಪ್ರದೇಶದಲ್ಲಿ 350 ಜನ ಕುಳಿತಕೊಳ್ಳಲು ಸ್ಥಳಾವಕಾಶವಿರುವ ಆ್ಯಂಪಿಥಿಯೇಟರ್, 450 ಚ.ಮೀ.ನಲ್ಲಿ ಮಕ್ಕಳ ಆಟದ ಪ್ರದೇಶ, 8 ಫುಡ್ ಕಿಯೋಸ್ಕೋಗಳಿವೆ.
111 ಚ.ಮೀ. ವಿಸ್ತೀರ್ಣದಲ್ಲಿ ಸಣ್ಣ ಸಮಾರಂಭದ ಪ್ರದೇಶ, 929 ಚ.ಮೀ. ವ್ಯಾಪ್ತಿಯಲ್ಲಿ ತೆರೆದ ಸಮಾರಂಭದ ಪ್ರದೇಶ, 95 ಚ.ಮೀ.ನಲ್ಲಿ ತೆರದ ವ್ಯಾಯಾಮ ಪ್ರದೇಶ, 34,000 ಚ. ಮೀ. ಪ್ರದೇಶದ ಉದ್ಯಾನವನ, ಧ್ಯಾನ ಮಂದಿರ ಹಾಗೂ ಸ್ಕೇಟಿಂಗ್ ಮೈದಾನ ಅಭಿವೃದ್ಧಿ ಪಡಿಸಲಾಗಿದೆ.
ಎರಡು ಗಜಿಬೋ, 29 ಶಿಲ್ಪಕಲೆಗಳ ದುರಸ್ತಿ ಹಾಗೂ ಮಳೆ ನೀರು ಚರಂಡಿ ನಿರ್ಮಾಣ, 3 ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ದ್ವಿಚಕ್ರ ವಾಹನ ಪಾರ್ಕಿಂಗ್ ಹಾಗೂ ಡೀಸೆಲ್ ಜನರೇಟರ್ ಸೆಟ್ ಅಳವಡಿಸಲಾಗಿದೆ.
ಇಂದಿರಾ ಗಾಜಿನ ಮನೆ: ಮಹಾತ್ಮ ಗಾಂಧಿ ಉದ್ಯಾನದಲ್ಲಿ 1600 ಚ.ಮೀ. ವಿಸ್ತೀರ್ಣದಲ್ಲಿ ರೂ. 1.71 ಕೋಟಿ ರೂ. ವೆಚ್ಚದಲ್ಲಿ ಇಂದಿರಾ ಗಾಜಿನ ಮನೆಗೆ ಎಂ.ಎಸ್. ಟ್ರಸ್, ಜಿ.ಐ. ಶೀಟ್ ಅಳವಡಿಕೆ, ಪೇಟಿಂಗ್ , ಸ್ಲೈಡಿಂಗ್ ಗೇಟ್, ಟಫಂಡ್ ಗ್ಲಾಸ್, ವಿದ್ಯುದ್ದೀಪಗಳ ಅಳವಡಿಕೆ ಮಾಡಲಾಗಿದೆ.
ಸಂಗೀತ ಕಾರಂಜಿ: ಮಹಾತ್ಮ ಗಾಂಧಿ ಉದ್ಯಾನದಲ್ಲಿ 220 ಚ.ಮೀ. ಪ್ರದೇಶದಲ್ಲಿ 4.67 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ, ಲೇಸರ್ ಷೋ, 150 ಸಂಖ್ಯೆ ನಾಜಲಗಳು, ಲೇಸರ್ ಷೋಗಾಗಿ ನೀರಿನ ಪರದೆ ಅಳವಡಿಸಲಾಗಿದೆ. ಪ್ರತಿ ದಿನ 30 ನಿಮಿಷಗಳ ಅವಧಿಯ 2 ಪ್ರದರ್ಶನಗಳು ನಡೆಯಲಿವೆ.
ಪಜಲ್ ಪಾರ್ಕಿಂಗ್ ಯೋಜನೆ: 80 ಚ.ಮೀ. ಪ್ರದೇಶದಲ್ಲಿ ರೂ.4.59 ಕೋಟಿ ವೆಚ್ಚದಲ್ಲಿ 6 ಹಂತದ 36 ಕಾರುಗಳ ಪಾರ್ಕಿಂಗ್ ಸೌಲಭ್ಯ ಹಾಗೂ 25 ಕಿಲೋ ವ್ಯಾಟ್ ಡಿಸೆಲ್ ಜನರೇಟರ್ ಸೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪುಟಾಣಿ ರೈಲು ಅಭಿವೃದ್ಧಿ: ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ರೂ 4.2 ಕೋಟಿ ವೆಚ್ಚದಲ್ಲಿ 960 ಮೀಟರ್ ಟ್ರ್ಯಾಕ್ ಹೊಂದಿರುವ ಪುಟಾಣಿ ರೈಲನ್ನು ಅಭಿವೃದ್ಧಿ ಪಡಿಸಲಾಗಿದೆ.
2 ಇಂಜಿನ್ಗಳು, 4 ಹವಾನಿಯಂತ್ರಿತ ಕೋಚ್ ಹಾಗೂ 2 ನಿಲ್ದಾಣಗಳನ್ನು ಹೊಂದಿವೆ. ಸಿ.ಸಿ.ಟಿವಿ ಕ್ಯಾಮೆರಾ ಹಾಗೂ ಆಟೋ ಮ್ಯಾಟಿಕ್ ಬಾಗಿಲು ತೆರೆಯುವ ವ್ಯವಸ್ಥೆ ಮತ್ತು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.
ಸ್ಮೋಕ್ ಡಿಟೆಕ್ಟರ್ ಹಾಗೂ ಬೆಂಕಿ ನಂದಿಸುವ ವ್ಯವಸ್ಥೆಗಳು ರೈಲಿನಲ್ಲಿವೆ. ಎಲ್ಇಡಿ ಸ್ಕ್ರೀನ್ ಗಳು ಮತ್ತು ಟಿವಿ ಸ್ಕ್ರೀನ್ ವ್ಯವಸ್ಥೆಯನ್ನು ಹೊಂದಿದೆ. ಪುಟಾಣಿ ರೈಲಿನಲ್ಲಿ 48 ಜನ ವಯಸ್ಕರಿಗೆ ಅಥವಾ 60 ಮಕ್ಕಳಿಗೆ ಕಳಿತುಕೊಳ್ಳುವ ಸ್ಥಳಾವಕಾಶವಿದೆ.