ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಡಿಸೆಂಬರ್, 24 ಮತ್ತು 25 ರಂದು ಮಡಿಕೇರಿಯ ರಾಜಸೀಟು ಉದ್ಯಾನವನದಲ್ಲಿ ಜೇನು ಉತ್ಸವವನ್ನು ಆಯೋಜಿಸಲಾಗಿದೆ.
ಕೊಡಗಿನ ಜೇನು ತುಪ್ಪ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಇಲ್ಲಿನ ಜೇನಿಗೆ ದೇಶ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ.
ಕೊಡಗಿನಲ್ಲಿ ಜೇನು ಕೃಷಿ ಯನ್ನು ಉತ್ತೇಜನಗೊಳಿಸಲು ಜೇನು ಬೆಳೆಗಾರರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸೊಸೈಟಿ ಮತ್ತು ಜೇನು ಪರಿಕರ ತಯಾರಕರು ಒಟ್ಟಿಗೆ ಕೂಡಿಸುವ ಪ್ರಯತ್ನ ಇದಾಗಿದೆ.
ಜೇನುತುಪ್ಪ ಉತ್ಪಾದನೆ ಕಂಪನಿಯನ್ನು ಒಂದೇ ವೇದಿಕೆಗೆ ತಂದು ಕೊಡಗಿನ ಜೇನನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಜೇನು ಉತ್ಸವವನ್ನು ರಾಜಸೀಟು ಉದ್ಯಾನವನದಲ್ಲಿ ಆಯೋಜಿಸಲಾಗಿದೆ.
ಜೇನು ಉತ್ಸವದಲ್ಲಿ ವಿವಿಧ ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ಸಂಘ ಸಂಸ್ಥೆಗಳು, ಜೇನು ತುಪ್ಪ ಉತ್ಪಾದನೆ ಮಾಡುವ ರೈತ ಉತ್ಪಾದನಾ ಕಂಪನಿಗಳು, ಜೇನು ಪೆಟ್ಟಿಗೆ, ಜೇನು ಮೇಣ, ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಕಂಪನಿಗಳನ್ನು ಜೇನು ಮೇಳದಲ್ಲಿ ಆಹ್ವಾನಿಸಲಾಗುವುದು.
ಸ್ಥಳೀಯ ಸಂಶೋಧನ ಕೇಂದ್ರದ ವಿಜ್ಜಾನಿಗಳು, ಅರಣ್ಯ ಕಾಲೇಜಿನ ಜೇನು ವಿಭಾಗದ ವಿಜ್ಜಾನಿಗಳು ಹಾಗೂ ಇಲಾಖೆಯ ಜೇನು ಕೃಷಿ ಅಧಿಕಾರಿಗಳಿಂದ ಜೇನು ಸಾಕಾಣಿಕೆ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ಪ್ರದರ್ಶನ ನೀಡಲಾಗುವುದು.
ಆದ್ದರಿಂದ ಜೇನು ಉತ್ಸವದಲ್ಲಿ ಮಾರಾಟ ಮಳಿಗೆ ಇಡಲು ಇಚ್ಚಿಸುವವರು ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೋಂದಾಹಿಸಿಕೊಳ್ಳಲು ಕೋರಿದೆ.
ವಸ್ತು ಪ್ರದರ್ಶನ ಮಳಿಗೆಯನ್ನು ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ಸಂಘ ಸಂಸ್ಥೆಗಳು, ರೈತ ಉತ್ಪಾದನಾ ಕಂಪನಿಗಳು, ಜೇನು ಪೆಟ್ಟಿಗೆ, ಜೇನು ಮೇಣ, ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಮೂಲ ಕಂಪನಿಗಳಿಗೆ ಮಾತ್ರ ನೀಡಲಾಗುವುದು.
ಹೆಚ್ಚಿನ ವಿವರಗಳಿಗೆ ಚಕ್ಕೇರ ಪ್ರಮೋದ್, ತೋಟಗಾರಿಕೆ ಉಪ ನಿರ್ದೇಶಕರು 9483110621 ಹಾಗೂ ವಸಂತ್ ಬಿ.ಡಿ ಜಿಲ್ಲಾ ಜೇನುಕೃಷಿ ಅಭಿವೃದ್ಧಿ ಅಧಿಕಾರಿ 9449075077 ರವರನ್ನು ಸಂಪರ್ಕಿಸಬಹುದು.