ಧಾರವಾಡ ಸಂಸದರಾದ ಪ್ರಹ್ಲಾದ್ ಜೋಷಿ ಅವರ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಮೂರುಸಾವಿರ ಮಠದ ಆವರಣದಲ್ಲಿ “ಬೃಹತ್ ಆರೋಗ್ಯ ತಪಾಸಣಾ ಶಿಬಿರ” ಆಯೋಜಿಸಲಾಗಿತ್ತು.
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ, ಭಾರತೀಯ ಜನತಾ ಪಕ್ಷ ಮತ್ತು ಕ್ಷಮತಾ ಸೇವಾ ಸಂಸ್ಥೆ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆಯ ವತಿಯಿಂದ ಶಿಬಿರವನ್ನು ಏರ್ಪಡಿಸಲಾಗಿತ್ತು.
ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಮತ್ತು ದಿವ್ಯ ಸಾನಿಧ್ಯವನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜ ಯೋಗೀಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವದಿಸಿದರು.
ಬಡವರಿಗೆ ಅನುಕೂಲವಾಗುವಂತೆ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಫಿಜಿಶಿಯನ್ನರು, ಹೃದಯ ರೋಗ ತಜ್ಞರು, ನರರೋಗ ತಜ್ಞರು, ಎಲುಬು ಕೀಲು ತಜ್ಞರು, ಶಸ್ತ್ರ ಚಿಕಿತ್ಸಕರು, ನೇತ್ರ ಚಿಕಿತ್ಸಕರು, ಚರ್ಮರೋಗ ತಜ್ಞರು, ಕಿವಿ ಮೂಗು ಗಂಟಲು ಹಾಗೂ ದಂತ ವೈದ್ಯರು ಭಾಗವಹಿಸಿದ್ದು, ಒಟ್ಟು 2660 ಜನರು ಈ ಶಿಬಿರದ ಮೂಲಕ ತಪಾಸಣೆ ನಡೆಸಿಕೊಂಡರು.
“ಜನರಿಗೆ ಅನುಕೂಲವಾಗುವಂತೆ ಸೇವಾ ಕಾರ್ಯ ಆಯೋಜಿಸಿದ ಆಯೋಜನಕರಿಗೂ ಹಾಗೂ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ”. ಎಂದು ಪ್ರಹ್ಲಾದ್ ಜೋಷಿ ಅವರು ಹೇಳಿದರು.