ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣ-2022 ರ ಅಡಿಯಲ್ಲಿ ನಗರ ನೈರ್ಮಲ್ಯ ಕ್ಷೇತ್ರದಲ್ಲಿ ಉದ್ಯಮ ಅಭಿವೃದ್ಧಿಗೆ ಸೂಕ್ತ ಪರಿಹಾರ ಸೃಜಿಸುವ ನಿಟ್ಟಿನಲ್ಲಿ ಡಿ.31 ರವರೆಗೆ ಸ್ವಚ್ಛ ತಾಂತ್ರಿಕ ಸ್ಪರ್ಧೆಯನ್ನು ಏರ್ಪಡಿಸಿದೆ.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು, ಕಂಪನಿಗಳು, ಹೊಸ ಉದ್ಯಮ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸರ್ಕಾರೇತರ ಸಂಸ್ಥೆಗಳು ಮುಂತಾದವುಗಳಿಂದ ಸಾಮಾಜಿಕ ಸೇರ್ಪಡೆ, ಶೂನ್ಯ ತ್ಯಾಜ್ಯ ಸುರಿಯುವಿಕೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಹಾಗೂ ಪಾರದರ್ಶಕತೆ ಕ್ಷೇತ್ರಗಳಲ್ಲಿ ನವೀನ ಪರಿಹಾರಗಳನ್ನು ಆಹ್ವಾನಿಸುವ ಮೂಲಕ ಪಾಲಿಕೆಯು ನಗರಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿದೆ.
ಆಸಕ್ತಿಯುಳ್ಳವರು https://forms.gle/YttoNCd4NHknaXH17 ಲಿಂಕ್ನ್ನು ಉಪಯೋಗಿಸಿ ನವೀನ ವೈಜ್ಞಾನಿಕ ಪರಿಹಾರಗಳನ್ನು ಅಪಲೋಡ್ ಮಾಡಬಹುದು. ವಿಜೇತರಿಗೆ ಪ್ರಥಮ ರೂ.50,000/- ದ್ವಿತೀಯ ರೂ.25,000/- ಬಹುಮಾನವನ್ನು ಘೋಷಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂತೋಷ ಮೊ.ಸಂ. 8123251524 ನ್ನು ಸಂಪರ್ಕಿಸಬಹುದು ಎಂದು ಹು-ಧಾ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.