ಕೃಷಿ ವಿವಿಯಲ್ಲಿ ಮತ ಎಣಿಕೆ: ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ

ಸಪ್ಟೆಂಬರ್ 3 ರಂದು ಜರುಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸಪ್ಟೆಂಬರ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಿಗೆ ಸೆ.3 ರಂದು ಚುನಾವಣೆ ಜರುಗಿದ್ದು,  420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮತ ಎಣಿಕೆ ಗೆ 140 ಸಿಬ್ಬಂದಿ; ಮೂರು ಟೇಬಲ್:

ನಾಳೆಯ ಮತ ಎಣಿಗೆಗಾಗಿ ಒಟ್ಟು 140 ಜನ ಸಿಬ್ಬಂದಿಗಳನ್ನು ತರಬೇತಿ ನೀಡಿ, ಸಿದ್ದಗೊಳಿಸಲಾಗಿದೆ. ಪ್ರತಿ ಚುನಾವಣಾಧಿಕಾರಿಗೆ ಮತಎಣಿಕೆ ಗಾಗಿ ಮೂರು ಟೇಬಲ್ ಗಳನ್ನು ಒದಗಿಸಲಾಗಿದೆ.

ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು ಪ್ರತಿಯೊಬ್ಬರಿಗೆ ಮೂರು ಟೇಬಲ್ ನೀಡಲಾಗಿದ್ದು, ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ  ಮೂರು ವಾರ್ಡ್ ಗಳ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ.

16 ಚುನಾವಣಾಧಿಕಾರಿಗಳು ಸೇರಿ ಒಟ್ಟು 48 ವಾರ್ಡ್‍ಗಳ ಮತಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ.  ಹೀಗೆ ಆಯಾ ವಾರ್ಡ್ ಮತಎಣಿಕೆ ಪೂರ್ಣಗೊಂಡ ನಂತರ, ಮತ್ತೊಂದು ವಾರ್ಡ್‍ನ ಮತಎಣಿಕೆ ಆರಂಭಿಸುತ್ತಾರೆ. ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡಗಳ ಫಲಿತಾಂಶವನ್ನು ಘೋಷಿಸುತ್ತಾರೆ.

ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ: ಮತ ಎಣಿಕಾ ಕೇಂದ್ರಕ್ಕೆ ಮತ ಮತ ಎಣಿಕಾ ಏಜಂಟ್, ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಬರಲು ಅವಕಾಶವಿದೆ.

ಮತ್ತು ಮತಗಳ ಎಣಿಕಾ ಟೇಬಲ್‍ಗೆ  ಪ್ರತಿ ವಾರ್ಡ್‍ನ ಮತ ಎಣಿಕೆಗಾಗಿ ಆ ವಾರ್ಡ್‍ಗೆ ಸ್ಪರ್ಧಿಸಿರುವ ಅಭ್ಯರ್ಥಿ ಪರವಾಗಿ  ಒಬ್ಬ ಮತ ಎಣಿಕಾ ಏಜೆಂಟ್ ಅಥವಾ ಚುನಾವಣಾ ಏಜೆಂಟ್ ಅಥವಾ ಅಭ್ಯರ್ಥಿ ಮಾತ್ರ ಹಾಜರಾಗಬೇಕು. ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. 

ಮತ ಎಣಿಕಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ವರ ಕರ್ತವ್ಯ. ಎಲ್ಕರೂ ಸಹಕಾರ ನೀಡಬೇಕು.

ಮತಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ  ಮಹಾನಗರ ಫೊಲೀಸ್ ಆಯುಕ್ತ ಲಾಬುರಾಮ ಅವರ ನೇತೃತ್ವದಲ್ಲಿ ಅಗತ್ಯ ಫೊಲೀಸ್ ಬಂದೊಬಸ್ತ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!