ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಹುಬ್ಬಳ್ಳಿಯ ಗೋಕುಲ್‌ ರಸ್ತೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಟ್ಟಡದಲ್ಲಿ ಸ್ಥಾಪಿಸಲಾದ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು (RFSL) ಇಂದು ಉದ್ಘಾಟನೆ ಮಾಡಲಾಯಿತು.

ಆರ್‌ಎಫ್‌ಎಸ್‌ಎಲ್ ಹುಬ್ಬಳ್ಳಿಯು ನಿರ್ದೇಶನಾಲಯ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಬೆಂಗಳೂರು, ಕರ್ನಾಟಕ ಇವರ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಲಿದೆ.

ಈ ಘಟಕವು ಡಿಎನ್‌ಎ ವಿಭಾಗ, ಭೌತಶಾಸ್ತ್ರ ವಿಭಾಗ, ಮೊಬೈಲ್ ಫೋರೆನ್ಸಿಕ್ ವಿಭಾಗ, ಕಂಪ್ಯೂಟರ ಫೊರೆನ್ಸಿಕ್ ವಿಭಾಗ ಮತ್ತು ಆಡಿಯೋ-ವಿಡಿಯೋ ಫೊರೆನ್ಸಿಕ್ ವಿಭಾಗಗಳನ್ನು ಹೊಂದಿದೆ.

ಎಲ್ಲಾ ವಿಭಾಗಗಳು ಕಾನೂನು ಜಾರಿ ಏಜೆನ್ಸಿಗಳ ಅಗತ್ಯತೆಗಳನ್ನು ಸಮಯೋಚಿತವಾಗಿ ಪೂರೈಸಲು ಮತ್ತು ಅಪರಾಧಿಕ ನ್ಯಾಯ ವಿತರಣ ವ್ಯವಸ್ಥೆಗೆ ಸಹಾಯ ಮಾಡಲು ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.

ಡಿಎನ್‌ಎ ವಿಶ್ಲೇಷಣೆಯು ಲೈಂಗಿಕ ಅಪರಾಧಗಳು, ಮಾನವ ಗುರುತಿಸುವಿಕೆ, ಪಿತೃತ್ವ/ಮಾತೃತ್ವ ವಿವಾದಗಳ ಮತ್ತು ಮಕ್ಕಳ ವಿನಿಮಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸುವುದನ್ನು ಒಳಗೊಂಡಿರುತ್ತದೆ.

ಡಿಜಿಟಲ್ ಫೋರೆನ್ಸಿಕ್ ಲೈಂಗಿಕ ಅಪರಾಧಗಳು, ಚಿತ್ರಗಳ ಮಾರ್ಫಿಂಗ್, ಆಡಿಯೋ-ವಿಡಿಯೋದೃಢೀಕರಣ ಮತ್ತು ಐಟಿ ಕಾಯ್ದೆ ೨೦೦೦ ಗೆ ಸಂಬoಧಿಸಿದ ಪ್ರಕರಣಗಳನ್ನು ಪರಿಹರಿಸುವಲ್ಲಿ ಕೇಂದ್ರೀಕರಿಸಲಿದೆ.

ಭೌತಶಾಸ್ತ್ರ ವಿಭಾಗವು ರಸ್ತೆ ಅಪಘಾತಗಳು, ಹಿಟ್ ಮತ್ತು ರನ್ ಪ್ರಕರಣಗಳು, ವಾಹನಗಳಲ್ಲಿ ಟ್ಯಾಂಪರಿಂಗ್, ವಿವಿಧ ವಸ್ತುಗಳ ನೈಜತೆ ಮತ್ತು ಭೌತಿಕ ಹೊಂದಾಣಿಕೆ, ಗುರುತು ಮತ್ತು ಹೋಲಿಕೆ, ದೃಢೀಕರಣದ ಪ್ರಕರಣಗಳನ್ನು ಕೈಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಧಾರವಾಡ ಸಂಸದರಾದ ಪ್ರಹ್ಲಾದ್ ಜೋಷಿ ಅವರು ಮಾತನಾಡಿ ಇಲ್ಲಿರುವ ಕೆಲವು ಕಾಲೇಜು, ವಿವಿಯಲ್ಲಿ ಸಹ ವಿಧಿ ವಿಜ್ಞಾನ ಕಲಿಯುವ ಹೊಸ ಯೋಜನೆ ತರಬೇಕು ಎಂದು ಹೇಳಿದರು.

ಅಲ್ಲದೆ ಹುಬ್ಬಳ್ಳಿಯ ಪ್ರಾದೇಶಿಕ ವಿಧಿವಿಜ್ಞಾನ ಕೇಂದ್ರವನ್ನು ಹೈದರಾಬಾದ್ ಬೆಂಗಳೂರು ಲೆವಲ್ ಗೆ ತೆಗೆದುಕೊಂಡು ಹೋಗಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಔರಾದ್ಕರ್ ವರದಿಯನ್ನು ಎಲ್ಲ ಅಂಶಗಳನ್ನ ತರದಿದ್ದರೂ ಕೆಲವೊಂದಿಷ್ಟು ಅಂಶಗಳನ್ನ ಜಾರಿಗೆ ತರಬೇಕೆಂದು ಸಿಎಂ ಗೆ ಜೋಶಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ವಿಧಾನಪರಿಷತ್ ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್, ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ, NWKRTC ಅಧ್ಯಕ್ಷರಾದ ಶ್ರೀ ವಿ ಎಸ ಪಾಟೀಲ್, ಪೊಲೀಸ್ ಆಯುಕ್ತ ಶ್ರೀ ಲಾಭೂರಾಮ್ ಹಾಗು ಐಎಎಸ್, ಐಪಿಎಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!