ಧಾರವಾಡ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಧಾರವಾಡ ಇವರು ಜಿಲ್ಲೆಯ 2022-23ನೇ ಸಾಲಿನ ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಯುವ ಮಂಡಳಗಳು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1960ರ ಅಡಿಯಲ್ಲಿ ನೋಂದಣಿಯಾಗಿರಬೇಕು. 2021-22ರ ಅಡಿಟ್ ರಿಪೋರ್ಟ ಇರಬೇಕು.

ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಸಂಯೋಜನೆ ಆಗಿರಬೇಕು. ದಿನಾಂಕ: 01-04-2021 ರಿಂದ 31-03-2022ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು.

ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪರಿಸರ ಸೌಂರಕ್ಷಣೆ, ವೃತ್ತಿ ತರಬೇತಿ, ಸಾಕ್ಷರತೆ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಯಂ ಉದ್ಯೋಗ, ಸ್ವಚ್ಛತಾ ಆಂದೋಲನ, ಸಾಮಾಜಿಕ ಪಿಡುಗುಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು, ಕ್ರೀಡೆಗಳು ಹಾಗೂ ಸಮಾಜ ಕಲ್ಯಾಣಗಳ ಬಗ್ಗೆ ಯುವ ಮಂಡಳಗಳು ಕೆಲಸ ಮಾಡಿರಬೇಕು.

ಅದರಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಯುವಜನರಿಗೆ ತಲುಪಿಸುವಲ್ಲಿ ಮಾಡಿದ ತಿಳುವಳಿಕೆ, ಹಾಗೂ ಈ ಕುರಿತು ಸಂಬಂಧಿಸಿದ ದಾಖಲೆಗಳು ಇರಬೇಕು.

ಜಿಲ್ಲಾ ಮಟ್ಟದ ಯುವ ಮಂಡಳ ಪ್ರಶಸ್ತಿ ರೂ.25,000/- ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಧಾರವಾಡ ಜಿಲ್ಲೆಯ ಆಸಕ್ತ ಯುವಕ, ಯುವತಿ, ಮಹಿಳಾ ಮಂಡಳಗಳು ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ, ಮಿನಿವಿಧಾನಸೌಧ ಧಾರವಾಡ ಇವರನ್ನು ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಬಹುದು.

ಪೂರ್ಣವಾದ ಅರ್ಜಿಗಳನ್ನು ಪ್ರಸ್ತಾವಣೆಯೊಂದಿಗೆ ಡಿಸೆಂಬರ್ 07 ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಅಧಿಕಾರಿಗಳು ನೆಹರು ಯುವ ಕೇಂದ್ರ, ಧಾರವಾಡ 0836-2971379, ಮೊ. 9848666536 ಇವರನ್ನು ಸಂಪರ್ಕಿಸಬಹುದು ಎಂದು ನೆಹರು ಯುವಕೇಂದ್ರ ಜಿಲ್ಲಾ ಯುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!